top of page

ಪ್ರಕೃತಿಯಲ್ಲಿ
ಆಟದ ಅನ್ವೇಷಣೆ

ನಮ್ಮ ಮುಂದಿನದು - ಬೆಂಗಳೂರು ನಗರ ಮತ್ತು ಅದರ ಪಕ್ಷಿಗಳ ಜೀವವೈವಿಧ್ಯತೆಯ ಕುರಿತಾದ ಬೋರ್ಡ್‌ಗೇಮ್, ಇದು ನಗರೀಕರಣ (ಧನಾತ್ಮಕ ಮತ್ತು ಋಣಾತ್ಮಕ ಘಟನೆಗಳು ಮತ್ತು ಕ್ರಿಯೆಗಳು) ಮತ್ತು ಅವುಗಳ ಸುತ್ತಲಿನ ಪಕ್ಷಿಗಳ ಜೀವನ-ಇತಿಹಾಸಗಳ ನಡುವಿನ ಪರಸ್ಪರ ಸಂಪರ್ಕವನ್ನು ಅನ್ವೇಷಿಸಲು ಆಟಗಾರರಿಗೆ ಸಹಾಯ ಮಾಡುತ್ತದೆ.

ನಮ್ಮ ಕೆಲಸದ ಕುರಿತು

ಪರಿಸರಶಾಸ್ತ್ರಜ್ಞರ ಮತ್ತು ಕ್ರೀಡಾ ವಿನ್ಯಾಸಕಾರರು ಹೊಂದಿರುವ ತಂಡ ನಮ್ಮದಾಗಿದ್ದು ಪ್ರಕೃತಿಗೆ ಸಂಬಂಧಿಸಿದ ಆಟಗಳನ್ನು ಹುಟ್ಟು ಹಾಕುವ ಉದ್ದೇಶಗಳನ್ನು ಇಟ್ಟುಕೊಂಡಿದ್ದೇವೆ. ನಾವು ಆಟಗಳನ್ನು ರಚಿಸಿ ಅದರ ಮೂಲಕ ಆಡುವವರಿಗೆ ಪ್ರಕೃತಿಯ ಬಗ್ಗೆ ಪರಿಚಯ ಮಾಡಿಕೊಳ್ಳಲು ಹಾಗೂ ವಿವಿಧ ಪಾರಿಸಾರಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೇವೆ. ನಮ್ಮ ವೈಯಕ್ತಿಕ ಪರಿಣತಿ ಒಂದಕ್ಕೊಂದು ಪೂರಕವಾಗುವಂತೆ  ಹೊಂದಾಣಿಕೆಯಿಂದ ಕೂಡಿದ್ದು, ನಾವು ತಯಾರಿಸುವ ಆಟಗಳು ವೈಜ್ಞಾನಿಕ ವೀಕ್ಷಣೆಗೆ ಹತ್ತಿರವಾಗಿದ್ದು ಆಟವಾಡಲು ಉತ್ಸುಕತೆಯನ್ನು ಹಾಗೂ ಖುಷಿಯನ್ನು ನೀಡುತ್ತದೆ. ನಾವು ಯಾವಾಗಲೂ ಜನರ ಜೊತೆ ಸಂಪರ್ಕ ಹೊಂದಿರಲು ಮತ್ತು ನಮ್ಮ ಕೆಲಸದ ಕಾರಣಗಳಿಗಾಗಿ ಇತರರ ಜೊತೆ ಸೇರಿಕೊಂಡು ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುತ್ತೇವೆ.

ನಮ್ಮನ್ನು ಸಂಪರ್ಕಿಸಿ contact.playinnature@gmail.com

6 – 4_2x.png
6 – 2_2x.png

ಪರಿಸರಶಾಸ್ತ್ರಜ್ಞ

ಗೇಮ್ ಡಿಸೈನರ್

ಪ್ರೀತಿಯವರ ಬಗ್ಗೆ

ಪ್ರಸಾದ್ ಅವರ ಬಗ್ಗೆ

ಶ್ರೀಮತಿ ಪ್ರೀತಿ, ಇವರು ಪರಿಸರ ವಿಜ್ಞಾನಿ. ಕಳೆದ ಕೆಲವು ವರ್ಷಗಳಿಂದ ಆಕೆಯ ಸಂಶೋಧನೆಯು ಪ್ರಾಥಮಿಕವಾಗಿ ಪಕ್ಷಿಗಳ ನಡವಳಿಕೆ ಮತ್ತು ಪಾರಿಸಾರಿಕ ಸಂವಹನಗಳ ಮೇಲೆ ಕೇಂದ್ರೀಕರಿಸಿದೆ. ಅವರು ಪ್ರಸ್ತುತ ದೇಶಾದ್ಯಂತ ಪಕ್ಷಿಗಳ ಜನಸಂಖ್ಯೆಯನ್ನು ವೀಕ್ಷಿಸುವ ಕಾರ್ಯತಂತ್ರ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಕಳೆದ 6 ವರ್ಷಗಳಲ್ಲಿ ಮಿಶ್ರ ಪ್ರಭೇದ-ಪಕ್ಷಿ ಹಿಂಡುಗಳಲ್ಲಿ ಪಕ್ಷಿಗಳ ನಡವಳಿಕೆಯನ್ನು ಅಧ್ಯಯನ ಮಾಡಿದ್ದಾರೆ ಮತ್ತು ಈಗ ಭಾರತದಾದ್ಯಂತ ಪಕ್ಷಿಗಳ ಜನಸಂಖ್ಯೆಯನ್ನು ವೀಕ್ಷಿಸುವ ಕಾರ್ಯತಂತ್ರ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.  ಹೆಚ್ಚಿನ ವ್ಯಾಪ್ತಿಯಲ್ಲಿ ಜನರಿಗೆ ತನ್ನ ಸಂಶೋಧನೆಯನ್ನು ತಿಳಿಸಲು ಸಂವಾದಾತ್ಮಕ ಸಾಧನಗಳನ್ನು ರಚಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ, ಅವರು ಹೊರಾಂಗಣದಲ್ಲಿ ಇರಲು ಇಷ್ಟಪಡುತ್ತಾರೆ- ವಾಯುವಿಹಾರ ಮಾಡುವುದು, ಆಟಗಳನ್ನು ಆಡುವುದು ಅಥವಾ ಕಾಡಿನಲ್ಲಿ ಸಂಚರಿಸುವುದು ಆದರೆ ಬಲವಂತವಾಗಿ ಮನೆಯೊಳಗೆ ಇರಬೇಕಾದ ಸಂಧರ್ಭದಲ್ಲಿ ಅವರು ಪುಸ್ತಕಗಳನ್ನು ಓದುತ್ತಾ ಮತ್ತು ಒಳಾಂಗಣ ಆಟಗಳನ್ನು ಆಡುತ್ತಾ ತನ್ನ ಸಮಯವನ್ನು ಕಳೆಯುತ್ತಾರೆ.

ಶ್ರೀಯುತ ಪ್ರಸಾದ್ ಅವರು ಬಹುಶಿಸ್ತೀಯ ವಿನ್ಯಾಸ ಸಲಹೆಗಾರರಾಗಿದ್ದು, ಶೈಕ್ಷಣಿಕ ತಂತ್ರಜ್ಞಾನ, ಆರೋಗ್ಯ-ರಕ್ಷಣೆ, ಸಾಮಾಜಿಕ ಸುರಕ್ಷತೆ, ಸುಲಭವಾಗಿ ಕೈಗೆಟಕುವ ಮತ್ತು ಸುಸ್ಥಿರತೆ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ 7 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. ಅವರು ಅನ್ವಯಿಕ ಕ್ರೀಡೆ ಹಾಗೂ ಕ್ರೀಡೆಯ ಸಾಮರ್ಥ್ಯವನ್ನು ಅನ್ವೇಷಿಸಿ, ವಿಸ್ತರಿಸುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದಾರೆ.  ಪ್ರಸಾದ್ ಅವರು ಪ್ರಸ್ತುತ ಇಂಟಲಿಜೆಂಟ್ ಗೇಮ್ಸ್ ಮತ್ತು ಗೇಮ್ಸ್ ಇಂಟೆಲಿಜೆನ್ಸ್ (IGGI) ನಲ್ಲಿ ತಮ್ಮ ಪಿಎಚ್‌ಡಿಯನ್ನು ಮುಂದುವರಿಸುತ್ತಿದ್ದಾರೆ, ಜೊತೆಗೆ ಯುವ ವಯಸ್ಕರಲ್ಲಿ ಹವಾಮಾನ ಮತ್ತು ವಾತಾವರಣದ ಬದಲಾವಣೆಯ ಬಗ್ಗೆ ಅರಿವು ಮೂಡಿಸುವಂತೆ, ಕಥೆ-ಆಧಾರಿತ ಆಟಗಳ ಮೇಲೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಸಂದರ್ಶಕ ಅಧ್ಯಾಪಕರಾಗಿ, ಪ್ರಸಾದ್ ಭಾರತದಲ್ಲಿನ ಸ್ನಾತಕೋತ್ತರ-ಪದವಿ ವಿನ್ಯಾಸ ವಿದ್ಯಾರ್ಥಿಗಳಿಗೆ ಅನ್ವಯಿಕ ಆಟದ ವಿನ್ಯಾಸ ಮತ್ತು ವಿನ್ಯಾಸ ಚಿಂತನೆಯ ಪಾಠಗಳನ್ನು ಕಲಿಸುವ ಶಿಕ್ಷಕರಾಗಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಮರಾಠಿ ಭಾಷೆಯಲ್ಲಿ ಸಣ್ಣ ಕಥೆಗಳು ಮತ್ತು ಪ್ರಬಂಧಗಳನ್ನು ಬರೆಯಲು ಇಷ್ಟಪಡುತ್ತಾರೆ.

Screenshot 2022-12-24 at 12.27.22 PM.png

ನಗರದಲ್ಲಿ ಪಕ್ಷಿಗಳು : ಬೆಂಗಳೂರು ಆವೃತ್ತಿ” - ಬೆಂಗಳೂರು ಸಸ್ಟೈನಬಿಲಿಟಿ ಫೋರಂನ ಸಣ್ಣ ಅನುದಾನ ಕಾರ್ಯಕ್ರಮದ ಭಾಗವಾಗಿ ಈ ಯೋಜನೆಗೆ ಹಣ ನೀಡಲಾಗಿದೆ.  https://www.bengalurusustainabilityforum.org/

ನಮ್ಮನ್ನು ಸಂಪರ್ಕಿಸಿ

ಇಮೇಲ್

©2022 by Play In Nature. Proudly created with Wix.com

bottom of page